ಶಿಗ್ಗಾವಿ:ರೈತನೊಬ್ಬ ಸಾಲಸೋಲ ಮಾಡಿ ಬೋರ್‌ವೆಲ್‌ಗೆ ವಿದ್ಯುತ್ ಸರಬರಾಜಿಗಾಗಿ ಹೊಲದಲ್ಲಿ ಹಾಕಿಸಿದ್ದ ಸೋಲಾರ್ ಪ್ಯಾನಲ್‌ಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆ ಶಿಗ್ಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಹೊಸೂರು ಗ್ರಾಮದ ಯಲ್ಲಪ್ಪ ಹೊಸಮನಿ ಎಂಬ ರೈತ ನಾಲ್ಕು ಎಕರೆ ಜಮೀನು ಹೊಂದಿದ್ದು, ಸುಮಾರು ₹4 ಲಕ್ಷ ಸಾಲ ಮಾಡಿ ತನ್ನ ಜಮೀನಿಗೆ ಸೋಲಾರ್ ಅಳವಡಿಸಿದ್ದರು. ಈಗ ದುಷ್ಕರ್ಮಿಗಳು ಈ ಸೋಲಾರ್ ಪ್ಯಾನಲ್‌ಗಳನ್ನು ಹೊಡೆದು ಹಾಳು ಮಾಡಿದ್ದು, ರೈತ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
22/07/2026 06:07 pm
LOADING...