ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ವಿ. ಡಿ. ಐ. ಟಿ.ಗೆ ಉದ್ಯಮ ತಂತ್ರಜ್ಞರ ಭೇಟಿ

ಅಳ್ನಾವರ: ಸಮೀಪದ ಹಳಿಯಾಳ ಪಟ್ಟಣದ ವಿ. ಡಿ. ಐ. ಟಿ. ತಾಂತ್ರಿಕ ಮಹಾವಿದ್ಯಾಲಯಕ್ಕೆ ಇತ್ತೀಚೆಗೆ ಬೆಂಗಳೂರಿನ ಅಗ್ರಣಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ. ವಿವೇಕಾನಂದ ಭಟ್ ಹಾಗೂ ಶ್ರೀ. ಮಧುಕರ್ ಭಟ್ ಅವರು ಭೇಟಿ ನೀಡಿದರು.

ವಿ. ಡಿ. ಐ. ಟಿ.ಯಲ್ಲಿನ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆ, ಕೈಗಾರಿಕಾ ಒಡಂಬಡಿಕೆ, ಪೇಟೆಂಟ್, ವಿದ್ಯಾರ್ಥಿಗಳ ತರಬೇತಿ, ಸಾಮಾಜಿಕ ಹಾಗೂ ಇನ್ನಿತರ ಬಹುಮುಖಿ ತಾಂತ್ರಿಕ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಶ್ರೀ. ಭಟ್ ಅವರು ಮಾತನಾಡಿ, ಟೆಸ್ಟ್, ಇನ್ಸ್‌ಪೆಕ್ಷನ್ ಮತ್ತು ಸರ್ಟಿಫಿಕೇಶನ್, ಎನರ್ಜಿ, ಸುರಕ್ಷತೆ ದೃಢೀಕರಣ, ವಿದ್ಯಾರ್ಥಿಗಳ ತಾಂತ್ರಿಕ ಸಂದರ್ಶನ ಹಾಗೂ ಮೌಲ್ಯಮಾಪನ, ಇನ್ನೂ ಹತ್ತು ಹಲವಾರು ವಿಷಯಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮಾರ್ಗದರ್ಶನ ನೀಡಿದರು.

ಮಹಾವಿದ್ಯಾಲಯದ ವಿವಿಧ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವನ್ನು ಡಾ. ಮಹೇಂದ್ರ ಮ. ದೀಕ್ಷಿತ್, ಡಾ. ಗುರುರಾಜ್ ಹಟ್ಟಿ ಹಾಗೂ ಡಾ. ಶಂಕರ ಬಡಿಗೇರ್ ಅವರು ಸಂಯೋಜಿಸಿದ್ದರು.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/07/2026 07:38 pm

Cinque Terre

12.17 K

Cinque Terre

0

ಸಂಬಂಧಿತ ಸುದ್ದಿ