ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಅಪ್ಪ ನೀನಿರಬೇಕು...": ಆಸ್ಪತ್ರೆ ಮಂಚದ ಬಳಿ ನಿಂತು ತಂದೆಗೆ ಧೈರ್ಯ ತುಂಬಿದ 7 ವರ್ಷದ ಮಗಳು

ಕೆಲವೊಮ್ಮೆ ವೈದ್ಯಲೋಕದ ಔಷಧಿಗಿಂತಲೂ ಪ್ರೀತಿಯ ಸ್ಪರ್ಶವೇ ಮಹತ್ವದ್ದಾಗುತ್ತದೆ. ಆಸ್ಪತ್ರೆಯ ಬೆಡ್‌ವೊಂದರ ಮೇಲೆ ಹಾರ್ಟ್ ಮಾನಿಟರ್ ಯಂತ್ರದ ಸದ್ದು ಕೇಳುತ್ತಾ ಜೀವನ ಮತ್ತು ಮರಣದ ಹೋರಾಟ ನಡೆಸುತ್ತಿದ್ದ ತಂದೆಗೆ, ಆತನ 7 ವರ್ಷದ ಪುಟಾಣಿ ಮಗಳು ತೋರಿದ ಆರೈಕೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿವೆ.

ಆಸ್ಪತ್ರೆಯ ಬೆಡ್‌ಮೇಲೆ ಅಸಹಾಯಕನಾಗಿ ಬಿದ್ದಿದ್ದ ತಂದೆಯ ಬಳಿ ನೀರು ತುಂಬಿದ ಬಾಟಲಿ ಹಿಡಿದು ನಿಂತ ಆ ಪುಟ್ಟ ಮಗಳು, "ಅಪ್ಪಾ... ಸ್ವಲ್ಪ ನೀರು ಕುಡಿ. ನಾನು ಬಿದ್ದಾಗ ನೀನು ಧೈರ್ಯವಾಗಿರಲು ಹೇಳುತ್ತಿದ್ದೆ ಅಲ್ವಾ? ಈಗ ನನ್ನ ಸರದಿ, ನಿನ್ನನ್ನು ನಾನು ಸೋಲಲು ಬಿಡುವುದಿಲ್ಲ" ಎಂಬ ಭಾವದಲ್ಲಿ ಆ ಪುಟಾಣಿ ಬಾಟಲಿಯಿಂದ ತಂದೆಗೆ ನೀರು ಕುಡಿಸುವ ಅತ್ಯಂತ ಭಾವನಾತ್ಮಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬದುಕಿನ ಕಠಿಣ ಹೋರಾಟದಲ್ಲಿ ದೊಡ್ಡ ದೊಡ್ಡ ವೈದ್ಯಕೀಯ ಚಿಕಿತ್ಸೆಗಳಿಗಿಂತಲೂ ಕುಟುಂಬದ ಸಣ್ಣ ಪ್ರೀತಿಯ ಸ್ಪರ್ಶವೇ ಶ್ರೇಷ್ಠವಾದದ್ದು. ನಾಳೆಯ ದಿನ ಹೇಗಿರುತ್ತದೋ ಯಾರಿಗೆ ಗೊತ್ತು? ನಿಮಗಾಗಿ ಕಾಯುತ್ತಿರುವ ನಿಮ್ಮ ಕುಟುಂಬದವರನ್ನು ಇಂದೇ ಪ್ರೀತಿಯಿಂದ ಅಪ್ಪಿಕೊಳ್ಳಿ... ಏಕೆಂದರೆ ಪ್ರೀತಿಯೇ ಜಗತ್ತಿನ ಅತ್ಯಂತ ದೊಡ್ಡ ಔಷಧಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/07/2026 01:16 pm

Cinque Terre

45.59 K

Cinque Terre

21

ಸಂಬಂಧಿತ ಸುದ್ದಿ