ಹಾವೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಹಾನಗಲ್ಲ ಯೋಜನಾ ಕಚೇರಿ ವ್ಯಾಪ್ತಿಯ ಆಡೂರ ವಲಯದ ಬಾಳಂಬೀಡ ವಾಲ್ಮೀಕಿ ಭವನದಲ್ಲಿ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ಸಹಾಯಕ ಕೃಷಿ ನಿರ್ದೇಶಕ ಸುರೇಶ ಸಿ.ಟಿ. ಹಾಗೂ ಆರ್‌ಎಸ್‌ಕೆ ಅಕ್ಕಿಆಲೂರಿನ ಕೃಷಿ ಅಧಿಕಾರಿ ಪರಶುನಾಥ ರೈತರಿಗೆ ಕೃಷಿ ಇಲಾಖೆಯ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಯೋಜನಾಧಿಕಾರಿ ರಘುರಾಮ ನಾಯ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಜುಳಾ ದುಂಡಣ್ಣನವರ, ಶ್ರೀಕಾಂತ ನಿಂಗಪ್ಪ ದುಂಡಣ್ಣನವರ, ಶ್ರೀನಿವಾಸ ಶಿವಪೂಜಿ, ರಾಜಣ್ಣ ಜಿನ್ನಣ್ಣನವರ ಹಾಗೂ ಮಾಲತೇಶ ಕಲ್ಲಿಕರಿಯಣ್ಣನವರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
08/09/2026 10:07 pm
LOADING...