ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ : ನಿಷೇಧದ ನಡುವೆಯೂ ಡಿಜೆ ಬಳಕೆ: ವಾಹನ ಸಮೇತ ಸೌಂಡ್ ಸಿಸ್ಟಂ ಜಪ್ತಿ ಮಾಡಿದ ಪೊಲೀಸರು

ಹಾನಗಲ್ : ಹಾವೇರಿ ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೂ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಸಿದ್ದಕ್ಕಾಗಿ, ಪೊಲೀಸರು ಸೌಂಡ್ ಸಿಸ್ಟಂ ಹಾಗೂ ಡಿಜೆ ಸಾಗಿಸುತ್ತಿದ್ದ ವಾಹನವನ್ನು ಸೀಜ್ ಮಾಡಿರುವ ಘಟನೆ ತಾಲೂಕಿನ ಗಿರಿಶಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಗಿರಿಶಿನಕೊಪ್ಪ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಸೂಚನೆ ಮತ್ತು ಕಟ್ಟುನಿಟ್ಟಿನ ನಿಷೇಧಾಜ್ಞೆಯನ್ನು ಮೀರಿ ಡಿಜೆ ಸೌಂಡ್ ಸಿಸ್ಟಂ ಬಳಸಲಾಗಿದೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಹಾನಗಲ್ ಠಾಣೆಯ ಪೊಲೀಸರು, ಮೆರವಣಿಗೆಯಲ್ಲಿದ್ದ ಡಿಜೆ ಸೌಂಡ್ ಸಿಸ್ಟಂ ಹಾಗೂ ಅದನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿಶಿನಕೊಪ್ಪ 'ಕಾ' ರಾಜಾ ಗಣಪತಿ ಮಂಡಳಿಯ 5ರಿಂದ 6 ಸದಸ್ಯರು ಹಾಗೂ 'ಮಾರಿಕಾಂಬಾ ಸೌಂಡ್ ಸಿಸ್ಟಂ' ಮಾಲೀಕ ಗುತ್ತೇಪ್ಪ ಗೋರಕ್ಕನವರ್ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

20/09/2026 04:18 pm

Cinque Terre

1.6 K

Cinque Terre

0

ಸಂಬಂಧಿತ ಸುದ್ದಿ